Home

2011 Census Population

 

Welcome to the website of Town Municipal Council Shikaripura

  The Town Municipal Council (TMC) Shikaripura was constituted in 1936. It is situated at  a distance of 52 Kms from Shimoga.  Shikaripura town is a historic place where Akkamahadevi a famous poetess birth in Uduthadi which  is near to Shikaripura . The Town has the famous Anjaneya temple having crores of saints.  The Balligavi and Thalagunda and Uduthadi stands at 10 Kms of the Town.  It has a population of 36,024 as per census 2011.  The TMC has 23 wards and equal number of councilors and 5 Numbers of Nominee Councilors.  Shikaripura TMC stretches to an area of 21.46 SqKms. 


 24 Hours  Help Line Service - Dial 08187-22277108187-222771


 ಆನ್ ಲೈನ್ ಕಂದಾಯ ಲೆಕ್ಕಾಚಾರ:

ಪುರಸಭೆ ಶಿಕಾರಿಪುರ ವ್ಯಾಪ್ತಿಯಲ್ಲಿರುವ ಎಲ್ಲಾ ಆಸ್ತಿದಾರರಿಗೆ ತಿಳಿಸಿಪಡಿಸುವುದೇನೆಂದರೆ, ಪುರಸಭೆ ಶಿಕಾರಿಪುರದಿಂದ ಅನ್ ಲೈನ್ ಕಂದಾಯದ ಲೆಕ್ಕಾಚಾರದ ವ್ಯವಸ್ಥೆ ಮಾಡಲಾಗಿರುತ್ತದೆ. ಆಸ್ತಿದಾರರು ಇದರ ಸದುಪಯೋಗಪಡಿಸಿಕೊಳ್ಳಬೇಕಾಗಿ ಕೋರುತ್ತೇವೆ.

ದಯಮಾಡಿ ಮೋಜಿಲ್ಲಾ ಫೈರ್ ಫಾಕ್ಸ್ ಬ್ರೌಸರ್ ನ್ನು ಉಪಯೋಗಿಸಲು ಕೋರಿದೆ.

ಲಿಂಕ್ ಗೆ ಇಲ್ಲಿ ಕ್ಲಿಕ್ ಮಾಡಿ  Online Property tax calculator.

ವಾರ್ಡ ಮತ್ತು ಬ್ಲಾಕ್ ಬಗ್ಗೆ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ   Ward Details.


COMPUTARIZATION:     We are very happy to inform the citizens of Shikaripura town that we have computerizing the collection of Property Tax , Birth and Death certificates from 1999 to till date under state Government KMRP computerization scheme, from now on wards citizens are requested to visit the Town Municipal Council, Shikaripura  and getting of Birth and Death certificates by paying service fee. Citizens are requested to make use of this facility.  


Solid Waste Management:

  Solid Waste Management in 23 wards has been outsourced. It includes  street sweeping and waste transportation. Citizens has to encourage the Door to Door collection activities in the wards and  pay the  service charges as per the MSW-rules for door-to-door collections. If you have any complaints regarding  solid waste management please call our helpline No-08187-22277108187-222771. Help us to keep your city clean and hygienic. -BY Chief Officer, TMC, Shikaripura.


ಮನೆ ಮನೆ ಕಸ ಸಂಗ್ರಹಣೆ: ಶಿಕಾರಿಪುರ ಪುರಸಭೆ ವ್ಯಾಪ್ತಿಯಲ್ಲಿ ಮನೆಗಳಿಂದ ಕಸ ಸಂಗ್ರಹಿಸಲು ತಳ್ಳುವ ಗಾಡಿ ಮತ್ತು ಆಟೋ ಟಿಪ್ಪರ್  ಸೌಲಭ್ಯ ಪ್ರಾರಂಭಿಸಿದ್ದು, ಸಾರ್ವಜನಿಕರು ಕಸವನ್ನು ಸಾರ್ವಜನಿಕ ರಸ್ತೆ, ಖಾಲಿ ನಿವೇಶನ, ಚರಂಡಿಯಲ್ಲಿ ಹಾಕಬಾರದು. ಕಸವನ್ನು ಹಸಿ ಕಸ(ಕೊಳೆಯುವ ಕಸ), ಒಣ ಕಸ(ಕೊಳೆಯದಿರುವ ಕಸ) ವಿಂಗಡಿಸಿ, ತಳ್ಳುವ ಗಾಡಿ ಮತ್ತು ಆಟೋ ಟಿಪ್ಪರ್ ಗೆ  ಕಸ ನೀಡತಕ್ಕದ್ದು, ತಳ್ಳುವ ಗಾಡಿ ಬಾರದಿದ್ದಲ್ಲಿ, ಚರಂಡಿ ಮತ್ತು ರಸ್ತೆಗೆ ಕಸವನ್ನು ಹಾಕದೇ ಪುರಸಭೆಯ ಟ್ರ್ಯಾಕ್ಟರ್ ಅಥವಾ ಕಂಟೈನರ್ ಗೆ ಹಾಕಲು ಸೂಚಿಸಿದೆ. ತಪ್ಪಿದ್ದಲ್ಲಿ ಅಂತವರ ಮನೆ ಮುಂದಿನ ಚರಂಡಿ ರಸ್ತೆ ಸ್ವಚ್ಚಗೊಳಿಸುವುದಿಲ್ಲ ಎಂದು ತಿಳಿಯುವುದು.- ಮುಖ್ಯಾಧಿಕಾರಿ, ಪುರಸಭೆ, ಶಿಕಾರಿಪುರ.


ಬೀದಿ ದೀಪಗಳ ನಿರ್ವಹಣೆ:   ಪುರಸಭೆಯ ಬೀದಿ ದೀಪಗಳ ನಿರ್ವಹಣೆಯನ್ನು ಮಾಡಲಾಗುತ್ತಿದ್ದು, ಸಾರ್ವಜನಿಕರು ಹೊಸದಾಗಿ ಬೀದಿ ದೀಪಗಳ ಅಳವಡಿಕೆ ಮತ್ತು ದುರಸ್ತಿಗೆ ಸಂಬಂಧಪಟ್ಟಂತೆ ಯಾವುದಾದರೂ ದೂರುಗಳಿದ್ದಲ್ಲಿ ಪುರಸಭೆಯ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸುವುದು,  ದೂರವಾಣಿ ಸಂಖ್ಯೆ- 08187-22277108187-222771   –ಮುಖ್ಯಾಧಿಕಾರಿ, ಪುರಸಭೆ, ಶಿಕಾರಿಪುರ  


ಮ್ಯಾನ್ಯುಯಲ್ ಸ್ಕ್ಯಾವೆಂಜಿಗ್: ಶಿಕಾರಿಪುರ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ಕರ್ನಾಟಕ ಸರ್ಕಾರವು The Employment of Manual scavengers and Construction of Dry Latrines(Prohibition) Act 1993ರ ರೀತ್ಯ ಕಾರ್ಮಿಕರಿಂದ ಶೌಚಾಲಯ ಗುಂಡಿ ಸ್ವಚ್ಚಗೊಳಿಸುವುದನ್ನು ನಿಷೇಧಿಸಿದೆ.  ಕಾರಣ ಯಾರೂ ಮನುಷ್ಯರಿಂದ ಶೌಚಾಲಯ ಗುಂಡಿ ಸ್ವಚ್ಚಗೊಳಿಸಬಾರದೆಂದು ಸೂಚಿಸಿದೆ. ಇದನ್ನು ಉಲ್ಲಂಘಿಸಿದವರು ಕಾರಗೃಹ ವಾಸದ ಶಿಕ್ಷೆಗೆ ಗುರಿಯಾಗುತ್ತಾರೆ.  ಸಾರ್ವಜನಿಕರಿಗೆ ತಮ್ಮ ಮನೆಯಲ್ಲಿರುವ ಶೌಚಾಲಯ ಗುಂಡಿಯನ್ನು ಸ್ವಚ್ಚಗೊಳಿಸಲು ಹಾಗೂ ಖಾಲಿ ಮಾಡಲು ಪುರಸಭೆಯಿಂದ ಸಕ್ಕಿಂಗ್ ಮತ್ತು ಜೆಟ್ಟಿಂಗ್ ಯಂತ್ರವನ್ನು ಉಪಯೋಗಿಸಲು ಒದಗಿಸಲಾಗಿದೆ ಸಾರ್ವಜನಿಕರು ಸದರಿ ಯಂತ್ರದ ಉಪಯೋಗವನ್ನು ಪುರಸಭೆಗೆ ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿದೆ.ತಪ್ಪಿದ್ದಲ್ಲಿ ಶಿಕ್ಷೆಗೆ ಗುರಿಯಾಗುವಿರಿ. ದೂರವಾಣಿ ಸಂಖ್ಯೆ- 08187-22277108187-222771 –ಮುಖ್ಯಾಧಿಕಾರಿ, ಪುರಸಭೆ, ಶಿಕಾರಿಪುರ.


ಮುಕ್ತಿ ವಾಹಿನಿ: ಶಿಕಾರಿಪುರ ಪುರಸಭೆ ವ್ಯಾಪ್ತಿಯಲ್ಲಿ ಮುಕ್ತಿವಾಹಿನಿ ಸೇವೆಯನ್ನು ನೀಡಲಾಗುತ್ತಿದೆ ಸಾರ್ವಜನಿಕರು ಸದರಿ  ಉಪಯೋಗವನ್ನು ಪುರಸಭೆಗೆ ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿದೆ. ದೂರವಾಣಿ ಸಂಖ್ಯೆ- 08187-22277108187-222771 –ಮುಖ್ಯಾಧಿಕಾರಿ, ಪುರಸಭೆ, ಶಿಕಾರಿಪುರ.


ಪ್ಲಾಸ್ಟಿಕ್ ಬಳಕೆ ನಿಷೇಧ: ಶಿಕಾರಿಪುರ ಪಟ್ಟಣದ ನಾಗರೀಕರಿಗೆ ಹಾಗೂ ವರ್ತಕರಿಗೆ ತಿಳಿಯಪಡಿಸುವುದೇನೆಂದರೆ, 40 ಮೈಕ್ರೇನ್ ಗಿಂತ ಕಡಿಮೆ ದಪ್ಪ ಇರುವ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಹಾಗೂ ಮಾರಾಟ ನಿಷೇದಿಸಿದೆ. ಕಾರಣ ಶಿಕಾರಿಪುರ ಪಟ್ಟಣದ ಸಾರ್ವಜನಿಕರು, ವರ್ತಕರು, ಉತ್ಪಾದಕರು 40 ಮೈಕ್ರೇನ್ ಗಿಂತ ತೆಳ್ಳಗಿನ ಪ್ಲಾಸ್ಟಿಕ್ ಉತ್ಪನ್ನಗಳನ್ನು  ಉಪಯೋಗಿಸದಂತೆ, ಮಾರಾಟ ಮಾಡದಂತೆ ಹಾಗೂ ಉತ್ಪಾದಿಸದಂತೆ ತಿಳಿಯಪಡಿಸಿದೆ. ಹಾಗೂ ಈ ಬಗ್ಗೆ ವಿಚಕ್ಷಣ ತಂಡ ಪರಿಶೀಲನೆಗೆ ಬಂದಾಗ ತಪಾಣೆಗೆ ಸಹಕರಿಸಲು ಕೋರಿದೆ. ತಪ್ಪಿದಲ್ಲಿ ಅಂತಹ ಉತ್ಪನ್ನ ಗಳನ್ನು ವಶಪಡಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಇದರಿಂದಾಗಬಹುದಾದ ಎಲ್ಲಾ ಕಷ್ಟ ನಷ್ಟಗಳಿಗೆ ನೀವೇ ಹೊಣೆಗಾರರಾಗಿರುತ್ತೀರಿ.   –ಮುಖ್ಯಾಧಿಕಾರಿ, ಪುರಸಭೆ, ಶಿಕಾರಿಪುರ.


ಸ್ವಚ್ಚತೆ: ಶಿಕಾರಿಪುರ ಪುರಸಭೆ ವ್ಯಾಪ್ತಿಯಲ್ಲಿ ಹೋಟೆಲ್ ಮಾಲೀಕರಿಗೆ ಹಾಗೂ ಮೀನು ಮತ್ತು ಮಾಂಸ ಮಾರಾಟಗಾರರಿಗೆ ತಿಳಿಯಪಡಿಸುವುದೇನೆಂದರೆ, ತಾವು ತಮ್ಮ ಹೋಟೆಲ್ ನಲ್ಲಿ ಮತ್ತು ಅಂಗಡಿಗಳಲ್ಲಿ ಶುಚಿತ್ವವನ್ನು ಕಾಪಾಡಬೇಕೆಂದು ತಿಳಿಸಲಾಗಿದೆ. –ಮುಖ್ಯಾಧಿಕಾರಿ, ಪುರಸಭೆ, ಶಿಕಾರಿಪುರ.


ಬಿಡಾಡಿ ದನಗಳು: ಶಿಕಾರಿಪುರ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಜಾನುವಾರು ಮಾಲೀಕರು ಸಾರ್ವಜನಿಕ ಸ್ಥಳ ಮತ್ತು ರಸ್ತೆಗಳಲ್ಲಿ ಜಾನುವಾರು ಬಿಡದಂತೆ ಜಾಗ್ರತೆ ವಹಿಸಲು ಸೂಚಿಸಿದೆ. ತಪ್ಪಿದಲ್ಲಿ ಅವುಗಳನ್ನು ಬಿಡಾಡಿ ದನಗಳೆಂದು ಪರಿಗಣಿಸಿ, ಪುರಸಭೆ ವಶಕ್ಕೆ ಪಡೆದು ವಿಲೇವಾರಿ ಮಾಡಲಾಗುವುದು. ಕಾರಣ ಜಾನುವಾರುಗಳನ್ನು ರಸ್ತೆಗಳಲ್ಲಿ ಬಿಡದಂತೆ ಕ್ರಮ ಜರುಗಿಸಲು ಸೂಚಿಸಿದೆ. - ಮುಖ್ಯಾಧಿಕಾರಿ, ಪುರಸಭೆ, ಶಿಕಾರಿಪುರ.


In The News

ಪುರಸಭೆ ಕೌನ್ಸಿಲ್ ಗೆ ದಿನಾಂಕ 17-03-2014 ರಂದು ಚುನಾವಣೆ ನಡೆದಿದ್ದು, ಶ್ರೀಮತಿ ಪಿ ಗೌರಮ್ಮ ರವರು ಅಧ್ಯಕ್ಷರಾಗಿ ಮತ್ತು ಶ್ರೀ ಸೈಯದ್ ಪೀರ್ ರವರು ಉಪಾದ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.

ಪುರಸಭೆ ವ್ಯಾಪ್ತಿಯಲ್ಲಿ ಶೇ. 7.25 ರ ಶೌಚಾಲಯ ನಿರ್ಮಾಣ ಮಾಡಲು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ವಿವರವನ್ನು ಕಛೇರಿ ಸೂಚನಾ ಫಲಕದಲ್ಲಿ ಹಾಗೂ ನಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಫಲಾನುಭವಿಗಳ ಬಗ್ಗೆ ಯಾವುದಾದರೂ ಆಕ್ಷೇಪಣೆ ಇದ್ದಲ್ಲಿ ಕಚೇರಿಗೆ ಪ್ರಕಟಣೆಗೊಂಡ 7 ದಿನಗಳೊಳಗಾಗಿ ತಮ್ಮ ಆಕ್ಷೇಪಣೆಯನ್ನು ನೀಡುವುದು.

 ಪುರಸಭೆ ವ್ಯಾಪ್ತಿಯಲ್ಲಿ ಶೇ. 22.75, 7.25 ಮತ್ತು 3 ಯೋಜನೆಯಡಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಸಲ್ಲಿಸಿರುವ ಅರ್ಜಿಗಳ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪುರಸಭೆಯ 23-ವಾರ್ಡ್ ಗಳ ಘನ ತ್ಯಾಜ್ಯ ವಸ್ತು ನಿರ್ವಹಣೆಯ ಬಗ್ಗೆ ಪುರಸಭೆ ವತಿಯಿಂದ ಬೀದಿ ನಾಟಕ ವನ್ನು ಪ್ರದರ್ಶಿಸಲಾಗುತ್ತಿದೆ. ಇದರಲ್ಲಿ ಕಸ ವಿಂಗಡಣೆ ಹೇಗೆ ಮಾಡಬೇಕು, ಹಾಗೂ ನಗರವನ್ನು ಹೇಗೆ ಸ್ವಚ್ಚವಾಗಿಡಬೇಕು ಹಾಗೂ ಇನ್ನಿತರ ವಿವರಗಳನ್ನು ಈ ಬೀದಿ ನಾಟಕದಲ್ಲಿ ಪ್ರದರ್ಶಿಸುತ್ತಿದ್ದಾರೆ.  

ಶಿಕಾರಿಪುರ ಪುರಸಭೆಯ 2012-13 ನೇ ಸಾಲಿನ ಶೇ.22.75, ಶೇ. 7.25 ಮತ್ತು ಶೇ. 3 ಯೋಜನೆಗಳಡಿ ವಿವಿಧ ಸೌಲಭ್ಯ/ತರಬೇತಿಗಳನ್ನು ನೀಡಲು ಈಗಾಗಲೇ ಅರ್ಜಿ ಆಹ್ವಾನಿಸಿ ಪುರಸಭೆ ಕೌನ್ಸಿಲ್ ಸಭೆಯಲ್ಲಿ ಫಲಾನುಭವಿಗಳ ಆಯ್ಕೆ ಮಾಡಲಾಗಿರುತ್ತದೆ. ಇವುಗಳಲ್ಲಿ ಸೂಕ್ತ ದಾಖಲೆಗಳನ್ನು ನೀಡಿದವರು ದಿನಾಂಕ: 27-05-2013 ರ ನಂತರ ಕಛೇರಿಗೆ ಹಾಜರಾಗಿ ಸೌಲಭ್ಯ ಪಡೆಯಲು ಹಾಗೂ ಸರಿಯಾದ ದಾಖಲೆಗಳನ್ನು ನೀಡದೇ ಇದ್ದವರು ಪೇಪರ್ ಪ್ರಕಟಣೆ ಪ್ರಚುರಪಡಿಸಿದೆ 7 ದಿನಗಳೊಳಗೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸಲು ತಿಳಿಸಿದೆ. ಫಲಾನುಭವಿಗಳ ಪಟ್ಟಿಯನ್ನು ನಮ್ಮ ವೆಬ್ ಸೈಟ್ ನ " ಫಲನಾಭವಿಗಳ ಪಟ್ಟಿ"  ಮೆನುವಿನಲ್ಲಿ ನೋಡಬಹುದು ಅಥವಾ ಇಲ್ಲಿ ಕ್ಲಿಕ್ ಮಾಡಿ , ಅಥವಾ  ಪುರಸಭೆ ಕಛೇರಿಯ ಸಮುದಾಯ ಸಂಘಟಕರಾದ ಶ್ರೀ. ರಾಮಚಂದ್ರಪ್ಪರವರನ್ನು ಸಂಪರ್ಕಿಸಬಹುದು. ಮೊಬೈಲ್ ಸಂ: 99803176449980317644. - ಮುಖ್ಯಾಧಿಕಾರಿ,ಪುರಸಭೆ,ಶಿಕಾರಿಪುರ.

ಪುರಸಭೆ ಕಾರ್ಯಾಲಯ, ಶಿಕಾರಿಪುರ ದಲ್ಲಿ  ವಿವಿಧ ಹೊಸ ಟೆಂಡರ್ ಗಳನ್ನು ಕರೆಯಲಾಗಿದೆ. ಮಾಹಿತಿಗಾಗಿ ನಮ್ಮ ವೆಬ್ ಸೈಟ್ ನ ಟೆಂಡರ್ ಮೆನುವುನಲ್ಲಿ ನೋಡಬಹುದು ಅಥವಾ ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ ಪಡೆಯಬಹುದು.

ಪುರಸಭೆ ಕಾರ್ಯಾಲಯ, ಶಿಕಾರಿಪುರ ದಲ್ಲಿ 31/10/2011 ರಂದು ಬೆಳಿಗ್ಗೆ 11:00 ಗಂಟೆಗೆ ಬ್ರಷ್ಟಾಚಾರ ವಿರುದ್ಧ ಜಾಗೃತಿ ಮೂಡಿಸಲು  "ಜಾಗೃತಿ ಅರಿವು ಸಪ್ತಾಹ" ವನ್ನು ಆಚರಿಸಲಾಯಿತು. ಈ ಆಚರಣೆಯಲ್ಲಿ ಕಛೇರಿಯ ಎಲ್ಲಾ ಸಿಬ್ಬಂದಿಗಳು ಸರ್ಕಾರದಿಂದ ಕೊಟ್ಟ ಒಂದು ಪ್ರತಿಜ್ಙೆಯನ್ನು ತೆಗೆದುಕೊಂಡರು.

 ಶಿಕಾರಿಪುರ ಪುರಸಭೆ ಕಾಯಾðಲಯಕ್ಕೆ ಸಂಭಂಧಿಸಿದ Public Disclosure Law 2011-12 ರ ಅಧð  ವಷðದ ಮತ್ತು 2010-11 ನೇ ಸಾಲಿನ ಪೂರ್ಣ ವಿವರವನ್ನು  ನಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಅದನ್ನು PDL ಮೆನುವಿನಲ್ಲಿ ನೋಡಬಹುದು.


 ಜನನ ಮತ್ತು ಮರಣ ಪ್ರಮಾಣ ಪತ್ರಗಳ ಬಗ್ಗೆ ಆನ್ ಲೈನ್ ಮೂಲಕ ನೋಡಬಹುದು ಇಲ್ಲಿ ಕ್ಲಿಕ್ ಮಾಡಿ

ಸಾವðಜನಿಕರು ತಮ್ಮ ದೂರುಗಳನ್ನು ಆನ್ ಲೈನ್ ಮೂಲಕ ದಾಖಲಿಸಬಹುದು ಇಲ್ಲಿ ಕ್ಲಿಕ್ ಮಾಡಿ


  ನಮ್ಮ ಎಲ್ಲಾ ನಾಗರೀಕರಿಗೆ ಹಾಗೂ ವೀಕ್ಷಕರಿಗೆ ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು

ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯೀ ಸಮಿತಿ ಅಧ್ಯಕ್ಷರು, ಸದಸ್ಯರು, ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ವರ್ಗ

ಪುರಸಭಾ ಕಾರ್ಯಾಲಯ, ಶಿಕಾರಿಪುರ.  

 

This Page is Maintained By : Mr. Ashok Kumar B R, Office Manager

No. Of Visitors :
Last Updated   : 22/01/2016  Release History
Release 2.0.0, Powered By Karnataka Municipal Data Society & maintained by Shikaripura TMC
This website can best viewed with the resolution 1024 * 768 using Internet Explorer 7.0 or above.
Valid CSS!